ರಾಮನವಮಿಯಂದು ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ( ಜೆಎನ್‌ಯು ) ಕ್ಯಾಂಪಸ್‌ನಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ . ಭಾನುವಾರ ಮಧ್ಯಾಹ್ನ 3 : 30 ಕ್ಕೆ ಕಾವೇರಿ ಹಾಸ್ಟೆಲ್‌ನಲ್ಲಿ ನಡೆದ ಗಲಾಟೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ . ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ( ಎಬಿವಿಪಿ ) ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಹಾಸ್ಟೆಲ್‌ನಲ್ಲಿ ಮಾಂಸ ಭಕ್ಷಗಳನ್ನು ನೀಡದಂತೆ ಸಿಬ್ಬಂದಿಯನ್ನು ತಡೆದಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ ( ಜೆಎನ್‌ಯುಎಸ್‌ಯು ) ಆರೋಪಿಸಿದೆ . ಇದಕ್ಕೆ ಪ್ರತಿಯಾಗಿ , ಎಬಿವಿಪಿ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮವನ್ನು ಎಡ ಸಂಘಟನೆಗಳ ಸದಸ್ಯರು ತಡೆಯಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ . ಇದರಿಂದ ಎಬಿವಿಪಿ ಮತ್ತು ಎಡಪಂತೀಯ ವಿದ್ಯಾರ್ಥಿ ಸಂಘಟಣೆಗಳ ಸದಸ್ಯರ ನಡುವೆ ಕಲ್ಲು ತೂರಾಟ ನಡೆದು , ಎರಡೂ ಕಡೆಯವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ . ಎಬಿವಿಪಿ ಗದ್ದಲ ಸೃಷ್ಟಿಸಲು ಗೂಂಡಾಗಿರಿ ಮಾಡಿದೆ ಎಂದು ಜೆಎನ್‌ಯುಎಸ್‌ಯು ಆರೋಪಿಸಿದೆ . ಪೊಲೀಸರು ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

0 Comments