ಇತಿಹಾಸವನ್ನು ತಿರುಚುವ ಕೆಲಸ ಆಗಬಾರದು ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ . ಕೆಳದಿ ಗುಂಡಾಜೋಯಿಸ್ ಹೇಳಿದರು ಅವರು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು , ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ , ಕರ್ನಾಟಕ ಜಾನಪದ ಪರಿಷತ್ತು , ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪತ್ರಿಕಾ ಬಳಗ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಿದ್ದಯುಗಾದಿ ಕವಿಗೋಷ್ಠಿ ಹಾಗೂ ತಾಲ್ಲೂಕು “ ಸಮಗ್ರಸಾಗರ ಅಧ್ಯಯನಕ್ಕೆ ಚಾಲನೆ ನೀಡಿ ಮಾತನಾಡಿದರು . ನಾವು ಮೊದಲು ನಮ್ಮಸ್ಥಳೀಯ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯತೆ ಇದೆ , ಇತಿಹಾಸ ನೈಜತೆಯ ಬದಲು ಕಾಲ್ಪನಿಕ ಇತಿಹಾಸದ ಬಗ್ಗೆ ಹೆಚ್ಚು ಒಲವು ತೋರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ , ಯಾವುದೇ ಕ್ಷೇತ್ರದ ಇತಿಹಾಸವನ್ನು ನಾವು ಸರಿಯಾಗಿ ಅರ್ಥಮಾಡಿ ಕೊಳ್ಳದ ಹೊರತು ಮಾತನಾಡು ವುದು ಸರಿಯಲ್ಲ , ಭಾರತದ ಪ್ರತಿಯೊಂದು ಗ್ರಾಮಕ್ಕೂ ತನ್ನದೆಯಾದ ಇತಿಹಾಸವಿದೆ . ಅಂತಹ ಇತಿಹಾಸವನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ , ಇತಿಹಾಸ ಪರಂಪರೆಯನ್ನು ಸಂರಕ್ಷಿಸುವ ಕೆಲಸ ಸ್ಥಳಿಯ ಸಂಸ್ಥೆಗಳಿಂದ ಮಾತ್ರ ಸಾಧ್ಯವಾಗುತ್ತದೆ . ತಾಲ್ಲೂಕಿನ ಸಮಗ್ರ ಅಧ್ಯಯನಕ್ಕೆ ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನಿಯ . ಅಲ್ಲದೆ ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ ಇಂತಹ ಕಾರ್ಯ ಎಲ್ಲಾ ಕಡೆಗೂ ಆಗಬೇಕಿದೆ.ಆನಂದಪುರದ ಚಂಪಕ ಸರಸ್ಸು ಮಹಾಂತಿನ ಮಠಕ್ಕೆ ತನ್ನದೆಯಾದ ಇತಿಹಾಸವಿದೆ ಇಂತಹ ಪಾಳು ಬಿದ್ದಸ್ಮಾರಕವನ್ನು ಸುಂದರವಾಗಿಸುವ ಕಾರ್ಯ ಅಭಿನಂದನಿಯವಾಗಿದೆ ಎಂದವರು ಹೇಳಿದರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ , ನಮ್ಮಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ , ಕಾಲೆಳೆಯುವ ಬದಲು ಕೈ ಹಿಡಿದರೆ ಮಾತ್ರ ಕಾರ್ಯ ಸಾಧನೆ ಸಾಧ್ಯವಾಗುತ್ತದೆ , ಸ್ವಾರ್ಥದಿಂದ ಸಾರ್ವತ್ರಿಕತೆಗೆ ಬರಬೇಕಾಗಿದೆ , ಸುಮ್ಮನಿದ್ದರೆ ಸುಧಾರಿಸಲು ಆಗುವುದಿಲ್ಲ , ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕಾಗಿದೆ ಎಂದರು . ಶಿಕಾರಿಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಘು ಮಾತನಾಡಿ ಸಾಹಿತ್ಯ ಮನಸ್ಸುಗಳನ್ನು ಒಂದು ಮಾಡುವ ಕಾರ್ಯ ಆಗಬೇಕಿದೆ , ಜಿಲ್ಲೆಯಲ್ಲಿ ಡಿ . ಮಂಜುನಾಥ ಅಧ್ಯಕ್ಷತೆಯಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ . ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಅವರು ಹೇಳಿದರು . ಬಿ.ಡಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು , ವೇದಿಕೆಯಲ್ಲಿ ಹೊಸನಗರ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ ಮುಂತಾದವರಿದ್ದರು .

0 Comments