ಯಕ್ಷಗಾನ ಕಲಾವಿದರಾದ ತೆಂಕುತಿಟ್ಟಿನ ಹಿರಿಯ ಕಲಾವಿದ ಚಿದಂಬರ ಬಾಬುರವರಿಗೆ ಕೋಣಂದೂರು ಮಲ್ಲಿಕಟ್ಟೆ ಸಮೀಪದ ಹಲ್ಕಾರ್ ಸವಿತಾ ಸಂಜೀವ ಕುಲಾಲ್ ಇವರ ಮನೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನದ ಸುಸಂದರ್ಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಮಲ್ಲಿಕಟ್ಟೆ ಮತ್ತು ಕೋಣಂದೂರಿನ ಗ್ರಾಮಸ್ಥರು ಸೇರಿ " ಮಲೆನಾಡ ಯಕ್ಷ ಮಾಣಿಕ್ಯ ' ಎಂಬ ಬಿರುದು ನೀಡಿ ಗೌರವಿಸಿ ಸನ್ಮಾನಿಸ ಲಾಯಿತು . ಕಾರ್ಯಕ್ರಮ ಆಯೋಜಕ ಹುಲ್ಲತ್ತಿರವಿ ಹಾಂಡ ಕಲಾವಿದರಿಗೆ ಸನ್ಮಾನ ಮಾಡುವುದು ವಿಶೇಷ ಕಾರ್ಯಕ್ರಮ . ಸಾಂಸ್ಕೃತಿಕ ಪರಂಪರೆಯಿಂದ ಬೆಳೆದು ಬಂದು ಊರು ಇದು ಒಂದು ಪುಣ್ಯಭೂಮಿ ಕರ್ನಾಟಕದಲ್ಲಿಯೇ ತೀರ್ಥಹಳ್ಳಿಗೆ ಒಂದು ವಿಶೇಷವಾದ ಸ್ಥಾನಮಾನವಿದೆ . ವರ್ಷದ ಎಲ್ಲಾ ದಿನವೂ ಕಲಾ ಸಂಸ್ಕೃತಿಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದ ಅವರು , ಚಿದಂಬರ ಬಾಬುರವರು ಹಿತ್ತಲಸರ ಎಂಬ ಕುಗ್ರಾಮದಲ್ಲಿ ಜನಿಸಿ ಯಕ್ಷಗಾನದಲ್ಲಿ ಆಸಕ್ತಿ ತೋರಿಸಿ ತಮ್ಮನ್ನು ತೊಡಗಿಸಿಕೊಂಡು ಸುಮಾರು ಮೂವತ್ತೈದು ವರ್ಷಗಳ ಕಾಲ ಸುಂಕದ ಕಟ್ಟೆ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಕಲಾ ಸೇವೆ ಸಲ್ಲಿಸಿ ಪ್ರಸ್ತುತ ಶ್ರೀ ಧರ್ಮಸ್ಥಳ ಕೃಪಾಪೋಷಿತ ಯಕ್ಷಗಾನ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸುದೀರ್ಘ ಸೇವೆ ಸಲ್ಲಿಸಿ ರಂಗ ಪ್ರವೇಶಿಸಿ ತಮ್ಮ
ವಿದ್ವತ್ ಪೂರ್ಣ ನಾಟ್ಯಾಭಿನಯ ಮಾಡಿ ಕುಣಿದು ಜನರನ್ನು ಪ್ರೇಕ್ಷಿಸಿದ ಅವರು ತಮ್ಮಅಭಿನಯದಲ್ಲಿ ನಿಜ ಸ್ವರೂಪದ ಅಣ್ಣಪ್ಪಸ್ವಾಮಿ , ಮಹಿಷಾಸುರ , ಭೀಮ , ಹನುಮಂತ , ರಾವಣ , ಭಸ್ಮಾಸುರ , ಅರ್ಜುನ ಹೀಗೆ ಅನೇಕ ಪಾತ್ರದ ಮುಖಾಂತರ ಅಭಿನಯಿ ಸಿದ್ದಾರೆ . ರಂಗ ಸ್ಥಳವನ್ನೇ ಕರ್ಮಸ್ಥಳ ಎಂದು ಭಾವಿಸಿ ಸತತ ನಲವತ್ತು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವ ಇವರ ವಿಶಿಷ್ಟ ಸಾಧನೆಯನ್ನು ಗಮನಿಸಿ ಇವರಿಗೆ " ಮಲೆನಾಡ ಯಕ್ಷ ಮಾಣಿಕ್ಯ ' ಎಂಬ ಬಿರುದು ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು .

0 Comments