ತರಕಾರಿ ಸಾಗಾಣಿಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ , ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ನಡೆದಿದೆ.ಶಿಕಾರಿಪುರ ತಾಲ್ಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ ( 50 ) ಹಾಗೂ ಭರಮಗೌಡ ಚಂದ್ರಪ್ಪ ( 35 ) ಮೃತಪಟ್ಟವರೆಂದು ಗುರುತಿಸಲಾಗಿದೆ.ಶಿರಾಳಕೊಪ್ಪ ಮಾರ್ಗವಾಗಿ ಸಾಗರದಡೆ ತೆರಳುತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

0 Comments