ಶಿವಮೊಗ್ಗ ಗ್ರಾಮಾoತರ :ಕರ್ನಾಟಕ ರತ್ನ ಡಾ . ಪುನೀತ್ ರಾಜ್‌ಕುಮಾರ್ ಅವರನ್ನು ನಾಡಿನುದ್ದಗಲಕ್ಕೂ ಜನ ಈ ರೀತಿ ಪ್ರೀತಿಸಲು ಅವರು ಮಾಡಿರುವ ಸಮಾಜಮುಖಿ ಕೆಲಸಗಳೇ ಕಾರಣ.ಎಲ್ಲ ಸ್ಥರಗಳನ್ನೂ ಮೀರಿ ಬೆಳೆದ ಹೃದಯವಂತ ಅವರಾಗಿದ್ದರಿಂದ ಇಂದು ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತಿದ್ದಾರೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.ಶಿವಮೊಗ್ಗ ತಾಲೂಕು ಚೋಡನಾಳ ಗ್ರಾಮದಲ್ಲಿ ಗುರುವಾರ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.ನಾಡಿಗೆ ಆದರ್ಶ ವ್ಯಕ್ತಿಯಾಗಿರುವ ಪುನೀತ್ ಅವರ ಸ್ಮರಣೆ ಕುರಿತ ಕಾರ್ಯಕ್ರಮಕ್ಕೆ ಹೋಗಲು ನನಗೆ ಬೇಸರವಾಗುತ್ತದೆ . ಅವರ ಬಂಧುವೂ ಆಗಿರುವ ನನಗೆ ಕಾರ್ಯಕ್ರಮಕ್ಕೆ ಭಾಗವಹಿಸಿದರೆ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಬರಬಾರದು.ಅವರು ರಾಜಕೀಯವನ್ನು ಮೀರಿ ಬೆಳೆದವರು ಈ ಕಾರಣದಿಂದ ನಾನು ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸದಿರಲು ನಿರ್ಧರಿಸಿದ್ದೇನೆ ಎಂದರು . ಪುನೀತ್ ಅವರು ತಮ್ಮವ್ಯಕ್ತಿತ್ವ ಸಿನೆಮಾ ಮತ್ತು ಕೆಲಸಗಳ ಮೂಲಕ ಯುವಜನರಿಗೆ ಒಂದು ಉದಾತ್ತ ಸಂದೇಶ ನೀಡಿದ್ದಾರೆ.ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ ಆದರೆ ಕೆಲಸಗಳು , ಮಾದರಿ ವ್ಯಕ್ತಿತ್ವದ ಮೂಲಕ ಎಲ್ಲರೊಂದಿಗಿದ್ದಾರೆ ಅವರಂತೆ ನಾವೂ ಜನಮುಖಿಯಾಗಿ ಚಿಂತನೆ ಮಾಡೋಣ ಎಂದು ಹೇಳಿದರು .

0 Comments