Header Ads Widget

header ads

ಸಾಗರದಲ್ಲಿ ಆರ್‌ಸಿಬಿ ಫ್ಯಾನ್ ಕ್ರೇಜ್ ಜೋರು . ! ಈ ಸಲ ಕಪ್ ನಮ್ಗ ಎಂದ RCB ಅಭಿಮಾನಿ ಸಂತೋಷ್ ಸದ್ಗುರು

 ಸಾಗರದಲ್ಲಿ ಆರ್‌ಸಿಬಿ ಫ್ಯಾನ್ ಕ್ರೇಜ್ ಜೋರು . ! ಈ ಸಲ ಕಪ್ ನಮ್ಗ ಎಂದ RCB ಅಭಿಮಾನಿ ಸಂತೋಷ್ ಸದ್ಗುರು














ಸಾಗರ : ಈ ಸಲ ಕಪ್ ನಮ್ಮೆ ' ಈ ವಾಕ್ಯ ನಿಮ್ಮಮನದಲ್ಲೂ ಗುಣು ಗುಡುತ್ತಿರ ಬಹುದು . ಇಂಡಿಯನ್ ಪ್ರೀಮಿ ಯರ್ ಲೀಗ್ ಟ್ವೆಂಟಿ -20 ಕ್ರಿಕೆಟ್ ಚಾಂಪಿಯನ್‌ಶಿಪ್ , ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿರೀಟ ಗೆಲ್ಲಲು ಪಣತೊಟ್ಟಿದೆ . ಅಭಿಮಾನಿಗಳಂತೂ ಈ ಬಾರಿ ಕಪ್ ಗೆದ್ದೇ ಗೆಲ್ಲೀವಿ ಎಂಬ ಅಚಲ ಆತ್ಮವಿಶ್ವಾಸ ದಲ್ಲಿದ್ದಾರೆ . ಇದರಂತೆ ಸಾಮಾಜಿಕ ಜಾಲತಾಣಗಳಲ್ಲಿ ' ಈ ಸಲ ಕಪ್ ನಮ್ಮೆ ' ಎಂಬ ಹ್ಯಾಶ್ಟ್ಯಾಗ್ ಗಳು ಕೂಡ ವೈರಲ್ ಆಗಿ ಹರಡುತ್ತಿದೆ . ಈ ಡೈಲಾಗ ಮೂಲಕ ಆರ್ಸಿಬಿ ಫ್ಯಾನ್ಸ್‌ಗಳು ಒಂದಲ್ಲ ಒಂದು ರೀತಿ ಹವಾ ಎಬ್ಬಿಸುತ್ತಲೇ ಇರುತ್ತಾರೆ . ಅಂತೆಯೇ.ಸಾಗರದಲ್ಲೂ ಕೂಡ ಐಪಿಎಲ್ ಜ್ವರ ಹೆಚ್ಚಾಗಿದೆ . ಇದಕ್ಕೆ ತಾಜಾ ಉದಾಹರಣೆ ಯಾಗಿದ್ದು , ನಗರದ " ಸದ್ಗುರು ಹೋಟೆಲ್ ಮಾಲೀಕ ಸಂತೋಷ್ ಸದ್ಗುರು " ಒಂದಲ್ಲಾ ಒಂದು ರೀತಿ ವಿನೂತನವಾಗಿ ಆರ್‌ಸಿಬಿ ತಂಡಕ್ಕೆ ಶುಭಾಶಯ ಏನಾದರೊಂದು ಮಾಡುತ್ತಲೆ ಇರುತ್ತಾರೆ . ಕಳೆದ ವರ್ಷ ಬಜಾಜ್ ಚೇತಕ್ ಬೈಕ್ ಇದೀಗ ಫಿಯೆಟ್ ಕಾರೊಂದನ್ನು ವಿನ್ಯಾಸ ಗೊಳಿಸಿ . ಕ್ರಿಕೆಟ್ ಪ್ರೇಮಿಗಳಿಗೆ ಮಾದರಿ ಯಾಗಿದ್ದಾರೆ . ಅಲ್ಲದೇ ಫಿಯಟ್ ಕಾರಿನ ಮೇಲೆ " ಈ ಸಲ ಕಪ್ ನಮ್ಮೆ ” ಎಂದು ಬರೆಸಿ ಆರ್‌ಸಿಬಿ ಮೇಲೆ ಇರುವ ಪ್ರೀತಿ ತೋರಿಸಿ ದ್ದಾರೆ . ಅಷ್ಟೇ ಅಲ್ಲದೆ ಕನ್ನಡ ಚಿತ್ರ ರಂಗದ " ನಟರಾದ ಶಂಕರ್ ನಾಗ್.ಪುನಿತ್ ರಾಜ್ ಕುಮಾರ್.ಡಾ.ರಾಜ್ ಕುಮಾರ ವಿಷ್ಣುವರ್ಧನ್ ರವರ " ಭಾವಚಿತ್ರಗಳನ್ನು ಕೂಡ ಅಂಟಿಸಿ ಕನ್ನಡ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ . ಅಂದ ಹಾಗೆ ಸಂತೋಷ್ ಸದ್ಗುರು ರವರು ವಿನ್ಯಾಸ ಗೊಳಿಸಿದ ಫಿಯಟ್ ಕಾರನ್ನು ಕಲ್ಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ " ಕನ್ನಡತಿ " ಧಾರಾವಾಹಿಯ ನಾಯಕಿ ನಟಿ " ರಜಿನಿ ರಾಘವನ್ ರವರು ಸಾರ್ವಜನಿಕ ಪ್ರದರ್ಶನಕ್ಕಾಗಿ ಕಾರಿನ ಪರದೆ ಸರಿಸುವ ಮೂಲಕ ಚಾಲನೆ ನೀಡಿದರು . ವಿನೂತನ ಕಾರಿನ ಮುಂದೆ ಸೆಲ್ಸಿಗಾಗಿ ಮುಗಿ ಬೀಳುತ್ತಿದ್ದಾರೆ . ಇದು ಕಪ್ ಗೆಲ್ಲಲು RCB ಗೆ ಮತ್ತಷ್ಟು ಹುರಿದುಂಬಿಸಲಿದೆ .










Post a Comment

0 Comments